🌺ಅಮ್ಮ ಹಾಡಿದೊಂದು ಹಾಡು🌺


🌺
ಅಮ್ಮ ಹಾಡಿದೊಂದು ಹಾಡು
ಇನ್ನೂ ಮೊಳಗಿದೆ 
ಮನದ ಮೂಲೆಯನ್ನು ಸೋಕಿ
ಸದಾ ಸಂತೈಸಿದೆ                         !!ಅಮ್ಮ!!
🌺
ಬಾಳ ಪಯಣದಲ್ಲಿ ದಣಿದು
ಕುಸಿದು ಬೀಳಲು
ಎದ್ದು ಮುಂದೆ ಸಾಗುವಂತೆ
ಸ್ಪೂರ್ತಿ ತುಂಬಲು                       !!ಅಮ್ಮ!!
🌺
ಕತ್ತಲಲ್ಲಿ ಕಳೆದು ಹೋಗಿ
ಧೈರ್ಯ ಗುಂದದಂತೆ
ಹಣತೆಯಂತೆ ಬೆಳಗಿ ಬಾಳು
ಎಂದು ಹರಸುವಂತೆ                     !!ಅಮ್ಮ!!
🌺
ಅಂತರಂಗದಾ ಮೃದುಂಗ
ಸದಾ ಮಿಡಿಯುವಂತೆ
ಸ್ವರ,ರಾಗ,ತಾಳ,ಭಾವ,ಮೇಳ
ಒಲಿದು ಹಾಡಿದಂತೆ                      !!ಅಮ್ಮ!!
🌺
ಅರ್ಪಣೆ:- Metikurke Ramaswamy Kamala 

🌺ಖಾದರ್ ಮೊಹಿಯೊದ್ದೀನ್.ಕೆ.ಎಸ್

Comments

Popular posts from this blog

🌺ಈ ಕವಿತೆ🌺

ನಿಸರ್ಗದ ಹಾಡು